Level 56 ಬೈಬಲ್ ಕ್ವಿಜ್

551. ಯೋನನು ಪ್ರಯಾಣ ಮಾಡುತ್ತಿದ್ದ ಹಡಗಿಗೆ ಏನಾಯಿತು?

ಒಂದು ದೊಡ್ಡ ಬಿರುಗಾಳಿ ಸಮುದ್ರದ ಮೇಲೆ ಬೀಸಲು ಹಡಗು ಒಡೆದು ಹೋಗುವ ಹಾಗಾಯಿತು.(1:4)

552. ಯೋನನು ಹೇಗೆ ಸಮುದ್ರದ ಪಾಲಾದನು?

ನಾವಿಕರು ಅವನನ್ನು ಹಡಗಿನಿಂದ ಎತ್ತಿ ಎಸೆದರು (1:5-16)

553. ಯೋನನು ಒಣ ನೆಲದ ಮೇಲೆ ಮತ್ತೆ ಹೇಗೆ ಬಂದನು?

ಮೂರು ದಿನಗಳಾದ ಮೇಲೆ ದೇವರು ಮೀನಿಗೆ ಅಪ್ಪಣೆ ಕೊಡಲು, ಅದು ಅವನನ್ನು ದಡದ ಮೇಲೆ ಕಾರಿ ಬಿಟ್ಟಿತು

554. ಅವನ ಈ ಸಾಹಸ ಕಾರ್ಯವಾದ ಮೇಲೆ ದೇವರು ಯೋನನನ್ನು ನಿನೆವೆ ಎಂಬ ದೊಡ್ಡ ಪಟ್ಟಣಕ್ಕೆ ಕಳುಹಿಸಿದನು. ಯೋನನು ನಿನೆವೆಯ ಜನರಿಗೆ ಏನೆಂದು ಸಾರ ತೊಡಗಿದನು?

ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು (3:4)

555. ಯೋನನ ಸಂದೇಶವನ್ನು ಕೇಳಿಸಿಕೊಂಡ ನಿನೆವೆಯ ಅರಸನು ಏನು ಮಾಡಿದನು?

ಪ್ರತಿಯೊಬ್ಬನ್ನು ತನ್ನ ತನ್ನ ದುರ್ಮಾರ್ಗವನ್ನು ಮತ್ತು ಹಿಂಸೆಯನ್ನು ತೊರೆದು ಬಿಡಬೇಕು (5:9)

556. ದೇವರು ನಿನೆವೆ ಪಟ್ಟಣ ಮತ್ತು ಅದರಲ್ಲಿದ್ದ ಜನರಿಗೆ ಏನು ಮಾಡಿದನು?

ನಿನೆವೆ ಪಟ್ಟಣದವರು ಮಾನಸಾಂತರ ಪಟ್ಟದ್ದರಿಂದ ದೇವರು ಅವರನ್ನು ನಾಶ ಮಾಡದೆ ಉಳಿಸಿದನು(3:10)

557. ಯೋನನು ನಿನೆವೆಯವರಿಗೆ ದೇವರ ಸಂದೇಶವನ್ನು ಕೊಟ್ಟ ನಂತರ ಅವನು ಏನು ಮಾಡಿದನು?

ಅವನು ಪಟ್ಟಣವನ್ನು ಬಿಟ್ಟು ತನಗಾಗಿ ಒಂದು ಗುಡಿಸಲನ್ನು ಮಾಡಿಕೊಂದು ನಿನೆವೆ ಪಟ್ಟಣಕ್ಕೆ ಏನು ಮಾಡುವನೋ ಎಂದು ಕಾಯ್ದುಕೊಂಡು ನೋಡುತ್ತಾ ಇದ್ದನು (4:5)

558. ಯೋನನಿಗೆ ಬುದ್ಧಿ ಕಲಿಸಲು ಯೆಹೋವನು ಏನು ಮಾಡಿದನು?

ಯೋನನು ಸೋರೆ ಗಿಡಕ್ಕಾಗಿ ಸಿಟ್ಟುಗೊಂಡಾಗ ದೇವರು “ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರ ಪಡಬಾರದೇ” ಅಂದನು (4:11)

559. ಯೋನನ ಪುಸ್ತಕದಿಂದ ನಾವು ಕಲಿಯುವ ಮುಖ್ಯ ಪಾಠವೇನು?

ದೇವರ ದೃಷ್ಟಿಯಲ್ಲಿ ಎಲ್ಲಾ ಜನಾಂಗಗಳು ಸಮಾನರು, ದೇವರ ಕಣಿಕರವು ಎಲ್ಲಾ ಜನರ ಮೇಲಿದೆ.

560. ಮತ್ತಾಯನು ಪುಸ್ತಕವನ್ನು ಬರೆದವರು ಯಾರು?

ಸುಂಕ ವಸೂಲು ಮಾಡುತ್ತಿದ್ದವನು (9:9)

WhatsApp us