Level 59 ಬೈಬಲ್ ಕ್ವಿಜ್

581. ಲೂಕನು ಈ ಸುವಾರ್ತೆಯನ್ನು ಬರೆದ ಸಮಯ:

ಸುಮಾರು ಕ್ರಿ.ಶ.63-68

582. ಈ ಸುವಾರ್ತೆಯಲ್ಲಿರುವ ಮುಖ್ಯವಾದ ವಚನ ಯಾವುದು?

19:10

583. ಲೂಕನ ಸುವಾರ್ತೆಯಲ್ಲಿ ಯಾವ ವಿಷಯಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ?

ಪ್ರಾರ್ಥನೆ

584. ಲೂಕನು ತನ್ನ ಸುವಾರ್ತೆಯಲ್ಲಿ ಹೆಚ್ಚು ಲಕ್ಷ ಕೊಡುವ ಜನಾಂಗದವರಾರು?

ಅನ್ಯ ಜನರು

585. ಲೂಕನ ಸುವಾರ್ತೆ ಎಲ್ಲಿಂದ ಆರಂಭವಾಗುತ್ತದೆ?

ಸ್ನಾನಿಕನಾದ ಯೋಹಾನನ ಜನನ

586. ಇತರ ಸುವಾರ್ತೆಗಳಲ್ಲಿ ಬರೆಯದ ಕೆಲವು ಸಾಮ್ಯಗಳನ್ನು ಲೂಕನು ಬರೆದಿದ್ದಾನೆ, ಅವು ಯಾವುವು?

ತಪ್ಪಿ ಹೋದ ಮಗನ ಸಾಮ್ಯ

587. ಲೂಕನು ಬರೆದ ಎರಡನೆಯ ಪುಸ್ತಕ ಯಾವದು?

ಅಪೋಸ್ತಲರ ಕೃತ್ಯಗಳು

588. ಲೂಕನ ಸುವಾರ್ತೆಯು ವ್ಯಕ್ತಪಡಿಸುವುದೇನೆಂದರೆ;

ಲೂಕನು ಹೆಚ್ಚಾಗಿ ಓದಿದವನಾಗಿದ್ದನು

589. ಲೂಕನ ಸುವಾರ್ತೆಯಲ್ಲಿ ಇತರ ಸುವಾರ್ತೆಗಳಿಗಿಂತ ಹೆಚ್ಚು ಸ್ಥಾನಮಾನ ಕೊಡಲ್ಪಟ್ಟ ವ್ಯಕ್ತಿಗಳು;

ಸ್ತ್ರೀಯರು

590. ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಯಾರನ್ನು ಆರಿಸಿಕೊಂಡಿದ್ದಾನೆ? (1:27)

ಬುದ್ಧಿಹೀನರನ್ನು ಮತ್ತು ಬಲಹೀನರನ್ನು (1:27)