Level 63 ಬೈಬಲ್ ಕ್ವಿಜ್

621. ನೆರೆಯವರ ಬಗ್ಗೆ ಯೇಸು ಹೇಳಿದ ನಿಯಮ ಯಾವುದು?

ಜನರು ನಿಮಗೆ ಏನೇನು ಮಾಡಬೇಕೆಂಬುದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ (ಮತ್ತಾ 7:12)

622. ಯೇಸು ತೀರ್ಪು ಮಾಡುವುದರ ಬಗ್ಗೆ ಮತ್ತು ಬೇರೆ ಜನರನ್ನು ಟೀಕೆ ಮಾಡುವುದರ ಬಗ್ಗೆ ಏನು ಹೇಳಿದನು?

ನೀವು ಮಾಡುವ ತೀರ್ಪಿಗೆ ಸರಿಯಾಗಿ ನಿಮಗೂ ತೀರ್ಪಾಗುವುದು (ಮತ್ತಾ. 7:1)

623. ಕೋಪದ ಬಗ್ಗೆ ಹೇಳುವಾಗ ಯೇಸು ಯಾವುದನ್ನು ಹೇಳಲಿಲ್ಲ

ಕಣ್ಣಿಗೆ ಪ್ರತಿಯಾಗಿ ಕಣ್ಣನ್ನು, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ತೆಗಿಸು (ಮತ್ತಾ. 7:1)

624. ಯೇಸು ವೈರಿಗಳ ವಿಷಯದಲ್ಲಿ ಏನು ಹೇಳಿದನು?

ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ (ಮತ್ತಾ. 5:44)

625. ಹೆಂಡತಿಯ ಪರಿತ್ಯಾಗದ ವಿಷಯವಾಗಿ ಯೇಸು ಏನು ಹೇಳಿದನು?

ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು

626. ವ್ಯಬಿಚಾರದ ವಿಷಯದಲ್ಲಿ ಯೇಸು ಏನು ಹೇಳಿದನು?

ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು (ಮತ್ತಾ.5:28)

627. ಯೇಸು ಎಲ್ಲಾ ಮನುಷ್ಯರಿಗೆ ಮುಂದೆ ಬರಲಿಕ್ಕಿರುವ ನ್ಯಾಯ ತೀರ್ಪಿನ ವಿಷಯವಾಗಿ ತಿಳಿಸಿದನು. ಆತನು ಎರಡು ಗುಂಪುಗಳ ವಿಷಯವಾಗಿ ಮಾತನಾಡಿದನು. ಕಷ್ಟದಲ್ಲಿರುವಂತಹವರಿಗೆ ಸಹಾಯ ಮಾಡಿದ “ಕುರಿಗಳು” ಮತ್ತು ಸಹಾಯ ಮಾಡದೇ ಅಲಕ್ಷ ಮಾಡಿದ “ಆಡುಗಳು”. ಕುರಿಗಳಿಗೆ ಏನಾಯಿತು?

ಮೇಲಿನವು ಎರಡೂ ಸರಿ

628. ನಾವು ಜನರು ಮತ್ತು ನಮ್ಮ ನೆರೆ ಹೊರೆಯವರು ನೋಡುವ ಹಾಗೆ ನಮ್ಮ ಧರ್ಮ ಕಾರ್ಯಗಳನ್ನು ಅವರ ಮುಂದೆ ಮಾಡಬಾರದು ಯೇಸು ಯಾವ ಕಾರಣಕ್ಕಾಗಿ ಈ ರೀತಿ ಹೇಳಿದನು?

ಮೇಲಿನವು ಎರಡೂ ಸರಿ

629. “ಯೆಹೋವನಿಗೆ ಅಸಾದ್ಯವಾದದ್ದುಂಟೋ?” ಎಂಬ ಪ್ರಶ್ನೆಯನ್ನು ದೇವರು ಯಾವಾಗ ಕೇಳಿದನು?

ಅಬ್ರ್ರಹಾಮನಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂದಾಗ (ಆದಿ 18:14)

630. “ಮನುಷ್ಯರಿಗೆ ಬಾಯಿ ಕೊಟ್ಟರಾರು? ಒಬ್ಬನು ಮೂಕನಾಗಿ, ಮತ್ತೊಬ್ಬನು ಕಿವುಡನಾಗಿ, ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇಮಿಸಿದವರಾರು? ಯೆಹೋವನಾಗಿರುವ ನಾನಲ್ಲವೇ” ಎಂಬ ಪ್ರಶ್ನೆಯನ್ನು ದೇವರು ಯಾರಿಗೆ ಕೇಳಿದರು?

ಮೋಶೆ (ವಿಮೋ.4:11)

WhatsApp us