Level 69 ಬೈಬಲ್ ಕ್ವಿಜ್

681. ಧರ್ಮಶಾಸ್ತ್ರದ ಒಡಂಬಡಿಕೆಯ ಉದ್ದೇಶವೇನು?

ಕ್ರಿಸ್ತನೆಡೆಗೆ ನಡೆಸುವ ಉಪಾಧ್ಯಾಯ - ಗಲಾತ್ಯ 3:24

682. ನಾವು ಸಹೋದರರಿಗೆ ಸೇವೆ ಮಾಡಿದಾಗ ನಿಜವಾಗಿ ಯಾರಿಗೆ ನಾವು ಅದನ್ನು ಮಾಡುತ್ತೇವೆ?

ನಾವು ಅದನ್ನು ಯೇಸುವಿಗೆ ಮಾಡುತ್ತೇವೆ - ಮತ್ತಾಯ 25:40

683. ಪೌಲನ ಪ್ರಕಾರ, ಸ್ತ್ರೀಯರು ತಮ್ಮನ್ನು ಹೇಗೆ ಶೃಂಗರಿಸಿಕೊಳ್ಳಬೇಕು?

ಮರ್ಯಾದೆಗೆ ತಕ್ಕ ಉಡುಪನ್ನು ಧರಿಸಿ ಒಳ್ಳೆಯ ಕಾರ್ಯಗಳನ್ನು ಮಾಡುವುದು - 1 ತಿಮೋಥಿ 2:9-10

684. ತಿಮೋಥಿಯ ತಾಯಿ ಯಾರು?

ಯೂನಿಕೆ - 2ತಿಮೋಥಿ 1:5

685. ದಾನಿಯೇಲನ ಕನಸಿನಲ್ಲಿ ಬಂದಂತಹ ನಾಲ್ಕನೆಯ ಪ್ರಾಣಿ ಏನನ್ನು ಸೂಚಿಸುತ್ತದೆ?

ನಾಲ್ಕನೆಯ ಸಾಮ್ರಾಜ್ಯ - ದಾನಿ 7:23

686. ಅಂಜೂರ ಮರದ ಸಾಮ್ಯದಲ್ಲಿ, ಆ ಮರಕ್ಕೆ ಫಲ ಕೊಡಲು ಎಷ್ಟು ವರ್ಷಗಳ ಸಮಯ ನೀಡಲಾಗಿತ್ತು?

3 –ಲೂಕ 13:7

687. ಪಂಚಾಶತ್ತಮ ದಿನದಂದು ಅಪೋಸ್ತಲರು ಅನ್ಯಭಾಷೆಗಳಲ್ಲಿ ಮಾತನಾಡುವ ಅವಶ್ಯಕತೆ ಏನಿತ್ತು?

ಅನ್ಯಭಾಷೆಯ ಜನರಿಗೆ ದೇವರ ವಾಕ್ಯವನ್ನು ವಿವರಿಸಲು - ಅಪೋ 2:6-12

688. ಅಂತ್ಯಕಾಲದ ಸೂಚನೆ ಯಾವುದು?

ಮೇಲಿನ ಎಲ್ಲವೂ - 2 ತಿಮೋಥಿ 3:1-5

689. ರೋಮಾ 2:4ರ ಪ್ರಕಾರ, ದೇವರ ಒಳ್ಳೇತನವು ನಮ್ಮನ್ನು ಎಲ್ಲಿಗೆ ನಡೆಸುತ್ತದೆ?

ಪಶ್ಚಾತ್ತಾಪ - ರೋಮಾ 2:4

690. ಐಗುಪ್ತ ದೇಶದಿಂದ ಬಿಡುಗಡೆಯಾಗಿ ಬಂದ ದಿನವನ್ನು ಯೆಹೂದ್ಯರು ಯಾವ ಪರಿಶುದ್ಧ ದಿನವೆಂದು ಆಚರಿಸುತ್ತಾರೆ?

ಪಸ್ಕ- ವಿಮೋ12:1-12