Level 72 ಬೈಬಲ್ ಕ್ವಿಜ್

711. ಕ್ರೈಸ್ತರಿಗೆ ಯಾವುದು ಆರ್ಶೀವಾದಕರವಾದುದು ಎಂದು ಸೂಚಿಸಿದೆ?

ಆತನ ಭಕ್ತರಾಗಿ ಸಾಯುವುದು - ಪ್ರಕ 14:13

712. ಗೋಧಿ ಮತ್ತು ಹಣಜಿಯ ಸಾಮ್ಯದಲ್ಲಿ, ಹಣಜಿಯನ್ನು ಯಾವಾಗ ಹೊಲದಿಂದ ತೆಗೆಯುವರು?

ಸುಗ್ಗಿಯ ಕಾಲದಲ್ಲಿ - ಮತ್ತಾಯ 13:30

713. ಅರಣ್ಯಕಾಂಡದಲ್ಲಿ ಎಷ್ಟು ಅಧ್ಯಾಯಗಳಿವೆ?

36

714. ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾದರೆ ಇನ್ನು ನನಗೆ ಪಾಪಿಯೆಂದು ತೀರ್ಪಾಗುವುದು ಯಾಕೆ? _________ ಬರುವಂತೆ ಕೇಡು ಮಾಡೋಣ ಎಂದು ಯಾಕೆ ಹೇಳಬಾರದು?

ಮೇಲು - ರೋಮಾ 3:7

715. ಅವರು ಯೇಸುವನ್ನು ಮತ್ತು ಕಳ್ಳರನ್ನು ಬೇಗ ಶಿಲುಬೆಯಿಂದ ಇಳಿಸಬೇಕೆಂದು ಯಾಕೆ ಆತುರಪಟ್ಟರು?

ಫಸ್ಕ ಹಬ್ಬ ಬರುತ್ತಿತ್ತು - ಯೋಹಾನ 19:14-42

716. - ಪಾಪ ಮಾಡುವ ಆತ್ಮವು, _______

ಮರಣಿಸುವುದು - ಯೆಹೆ 18:20

717. ಎದೆಪದಕದಲ್ಲಿ ಎಷ್ಟು ಕಲ್ಲುಗಳಿದ್ದವು?

12 –ವಿಮೋ 28:21

718. ಶಿಷ್ಯರಿಗೆ ಯೇಸು ಎದ್ದಿದ್ದಾನೆ ಎಂದು ಹೇಳಲು ಮಗದ್ಧಲದ ಮರಿಯಳು ಹೋಗುತ್ತಿರುವಾಗ ಹಾದಿಯಲ್ಲಿ ಯಾರನ್ನು ಸಂಧಿಸಿದಳು?

ಯೇಸು - ಮತ್ತಾ 28:9

719. “ನಿನ್ನ ವಾಕ್ಯವು ನನ್ನ ____ಗಳಿಗೆ ದಾರಿದೀಪವಾಗಿದೆ, ಮತ್ತು ನನ್ನ ಹಾದಿಗಳಿಗೆ ಬೆಳಕಾಗಿವೆ ”

ಕಾಲು - ಕೀರ್ತನೆ 119:105

720. ಕೆತ್ತಿದ ವಿಗ್ರಹಗಳ, ಯಾವುದೇ ಚಿತ್ರಗಳ ಸ್ವರೂಪಗಳ ವಿಷಯದಲ್ಲಿ ಹೇಗಿರಬೇಕೆಂದು ದೇವರು ಎಚ್ಚರಿಸಿ ನುಡಿದಿದ್ದಾನೆ?

ಅವುಗಳನ್ನು ಆರಾಧಿಸಲೂಬಾರದು ಮತ್ತು ಅವುಗಳನ್ನು ಸೇವಿಸಲೂಬಾರದು – ಧರ್ಮೋ 4:15-19