Level 73 ಬೈಬಲ್ ಕ್ವಿಜ್

721. ಅಶುದ್ಧಾತ್ಮವು ಮನುಷ್ಯನನ್ನು ಬಿಟ್ಟು ಹಂದಿಗಳೊಳಗೆ ಹೊಕ್ಕಾಗ, ಹಂದಿಗಳ ಗುಂಪು ಎಷ್ಟಿತ್ತು?

ಸುಮಾರು 2000 ಪ್ರಾಣಿಗಳು – ಮಾರ್ಕ5:13

722. ಆದಾಮ ಮತ್ತು ಹವ್ವರ ಮೊದಲ ಮಗ ಯಾರು?

ಕಾಯಿನ – ಆದಿ 4:1

723. ಪ್ರಕಟಣೆ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ?

22

724. “ಭೂಮಿಯ ಕಡೆಯ ಭಾಗಗಳಲ್ಲಿರುವವರೇ, ______ ಕಡೆ ನೋಡಿ ರಕ್ಷಣೆಯನ್ನು ಹೊಂದಿರಿ, ಯಾಕಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ”

ನನ್ನ – ಯೆಶಾಯ 45:22

725. ಇವರಲ್ಲಿ ನೋಹನ ಮಗನು ಯಾರು?

ಶೇಮನು – ಆದಿ 7:13

726. ಸಂಸೋನನು ಎಷ್ಟು ಕಾಲ ಇಸ್ರಾಯೇಲ್ಯರಿಗೆ ನ್ಯಾಯಸ್ಥಾಪಕನಾಗಿದ್ದನು?

20 ವರ್ಷ - ನ್ಯಾಯ 16:30-31

727. ಇಸ್ರಾಯೇಲ್ಯರಲ್ಲಿ ಅತ್ಯಂತ ಸುಂದರ ಪುರುಷನು ಯಾರಾಗಿದ್ದನು?

ಅಬ್ಷಾಲೋಮ್-2ಸಮು:14:25

728. ಹನ್ನೊಂದು ಗಂಟೆ ಸಮಯದಲ್ಲಿ ಕೆಲಸಕ್ಕೆ ಬಂದ ಕೆಲಸಗಾರರಿಗೆ ದೊರೆತ ಕೂಲಿ ಎಷ್ಟು?

ಬೇರೆಯವರಿಗೆ ದೊರೆತಷ್ಟು – ಮತ್ತಾಯ 20:2-11

729. ಒಂದು ತಲಾಂತು ಇದ್ದ ಸೇವಕನನ್ನು ಯಜಮಾನನು ಛೀಮಾರಿ ಹಾಕಿದ್ದು ಯಾಕೆ?

ಅವನು ಅದನ್ನು ಹೆಚ್ಚಗೆ ಮಾಡಲಿಲ್ಲ – ಮತ್ತಾಯ 25:24,27

730. ಯೇಸುವಿನ ದೇಹವನ್ನು ಸಮಾಧಿ ಮಾಡಲು ಪಿಲಾತನನ್ನು ಯಾರು ಹೋಗಿ ಕೇಳಿದರು?

ಅರಿಮಥಾಯದ ಯೊಸೇಫ - ಲೂಕ 23:50

WhatsApp us