Level 74 ಬೈಬಲ್ ಕ್ವಿಜ್

731. ಮೊಟ್ಟಮೊದಲಿಗೆ ಅರವಳಿಕೆಯನ್ನು ಪಡೆದವರು ಮತ್ತು ಮೂಳೆಗಳ ಶಸ್ತ್ರಚಿಕಿತ್ಸೆ ಹೊಂದಿದವರು ಯಾರು?

ಆದಾಮ – ಆದಿ 2:21

732. ಅಬ್ರಹಾಮನ ಪಾರುಪತ್ಯಗಾರನಾಗಿರುವ ಎಲಿಯೇಜರನು ಯಾವ ಪಟ್ಟಣದಿಂದ ಬಂದವನು?

ದಮಸ್ಕಸ್ – ಆದಿ 15:2

733. ಶಿಷ್ಯರು ಎಮ್ಮಾಹುವಿಗೆ ಹೋಗುವ ದಾರಿಯಲ್ಲಿರುವಾಗ ಯೇಸುವು ಶಾಸ್ತ್ರಗಳ ಅರ್ಥವನ್ನು ಅವರಿಗೆ ಹೇಗೆ ವಿವರಿಸಿದನು?

ಮೋಶೆ ಮೊದಲುಗೊಂಡು ಎಲ್ಲಾ ಪ್ರವಾದಿಗಳು ಕ್ರಮವಾಗಿ - ಲೂಕ 24:27

734. ಏಸಾವನು ಯಾಕೋಬನನ್ನು ಬಿಟ್ಟು ತನಗಿದ್ದವುಗಳೆಲ್ಲವನ್ನು ಮತ್ತು ತನ್ನ ಕುಟುಂಬವನ್ನು ತೆಗೆದುಕೊಂಡು-------ನಲ್ಲಿ ವಾಸಿಸಿದನು

ಸೆಯೀರ್ ಬೆಟ್ಟ – ಆದಿ 36:6-8

735. ಜೆಬೆದಾಯನ ಹೆಂಡತಿ ಮತ್ತು ಅಪೋಸ್ತಲನಾದ ಯಾಕೋಬಿನ ತಾಯಿ ಮತ್ತು ಹಿರಿಯರು ಮತ್ತು ಯೋಹಾನನು ಸಮಾಧಿಯ ಬಳಿ ಬಂದರು. ಅವರ ಸಂಗಡ ಇನ್ನೂ ಯಾರಿದ್ದರು?

ಸಲೋಮಿ – ಮಾರ್ಕ16:1

736. ಕೆಟ್ಟ ಕುಮಾರನು ಹಿಂತುರಿಗಿದಾಗ ಅವನ ತಂದೆಯು ಈ ಕೆಳಗಿನವುಗಳಲ್ಲಿ ಯಾವುದನ್ನು ಕೊಡಲಿಲ್ಲ?

ಚಿನ್ನ ಮತ್ತು ಬೆಳ್ಳಿ - ಲೂಕ 15:22

737. ನಿಕೋದೇಮನೊಂದಿಗೆ ಕರ್ತನ ಚರ್ಚೆಯ ನಂತರ, ಆತ್ಮನಿಂದ ಹುಟ್ಟಿದ ಮನುಷ್ಯನು:

ಗಾಳಿಯ ಹಾಗೆ, ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನೀವು ಹೇಳುವುದಕ್ಕಾಗುವುದಿಲ್ಲ – ಯೋಹಾನ 3:6-8

738. ಯಾಜಕರು ತುತ್ತೂರಿಗಳನ್ನು ಊದಿದಾಗ, ಯಾವ ಪಟ್ಟಣದ ಗೋಡೆಗಳು ಬಿದ್ದುಹೋದವು?

ಯೆರಿಕೋ – ಯೆಹೋ 6:20

739. ಅಂತ್ಯಕ್ರಿಸ್ತನು ಕಡೇ ದಿನಗಳಲ್ಲಿ ಒಬ್ಬ ವ್ಯಕ್ತಿಯಾಗಿರುವನು ಎಂದು ಯಾವುದರಲ್ಲಿ ಸೂಚಿತವಾಗಿದೆ?

ಸತ್ಯವೇದದಲ್ಲಿ ಎಲ್ಲೂ ಇಲ್ಲ – ಅಂತ್ಯಕ್ರಿಸ್ತನು ವ್ಯಕ್ತಿಯಾಗಿರುವನು ಎಂದು ಸೂಚಿಸುವ ಯಾವುದೇ ನೇರವಾದ ವಾಕ್ಯ ಇಲ್ಲ

740. ಆರೋಗ್ಯದ ವಿಷಯದಲ್ಲಿ, ಪೌಲನು ತಿಮೋಥಿಗೆ ನೀರಿನ ಬದಲಿಗೆ ಯಾವ ಪಾನೀಯವನ್ನು ಕುಡಿಯಬೇಕೆಂದು ಪ್ರಭೋದಿಸಿದನು?

ದ್ರಾಕ್ಷಾರಸ – 1ತಿಮೋ5:23