Level 76 ಬೈಬಲ್ ಕ್ವಿಜ್

751. ಒಬ್ಬ ಮನುಷ್ಯನು ಒಂದು ಪಟ್ಟಣವನ್ನು ಕಟ್ಟಿ ಆ ಪಟ್ಟಣಕ್ಕೆ ತನ್ನ ಮಗನಾದ ಹನೋಕನ ಹೆಸರಿಟ್ಟನು. ಆ ಮನುಷ್ಯನು ಯಾರು?

ಕಾಯಿನ – ಆದಿ 4:17

752. ತನ್ನ ಚಪ್ಪಲಿಯನ್ನು ತೆಗೆಯುವುದರ ಮೂಲಕ ಸ್ವಲ್ಪ ಹೊಲವನ್ನು ಮತ್ತು ಹೆಂಡತಿಯನ್ನು ಗಳಿಸುವ ಒಪ್ಪಂದಕ್ಕೆ ಒಡಂಬಟ್ಟವರು ಯಾರು?

ಬೋವಜನು – ರೂತ 4:8-10

753. ತನ್ನ ಬರಿಯ ಕೈಗಳಿಂದ ಸಂಸೋನನು ಯಾವ ಪ್ರಾಣಿಯನ್ನು ಕೊಂದನು?

ಸಿಂಹ - ನ್ಯಾಯ14:5-9

754. 4ನೇ ಮುದ್ರೆಯನ್ನು ತೆರೆದ ಮೇಲೆ ಯೋಹಾನನು ಏನನ್ನು ಕಂಡನು?

ಬೂದುಬಣ್ಣದ ಕುದುರೆಯ ಮೇಲೆ ಕುಳಿತಿದ್ದ ಮೃತ್ಯವೆಂಬ ಹೆಸರುಳ್ಳ ಸವಾರ - ಪ್ರಕ 6:7-8

755. ಕ್ರಿಸ್ತನು ನಮ್ಮ ಹೃದಯಗಳಲ್ಲಿ ಯಾವುದರ ಮುಖಾಂತರ ವಾಸಿಸುತ್ತಾನೆ?

ನಂಬಿಕೆ – ಎಫೆಸ3:17

756. “ಕರ್ತನ ಭಯವೇ _____ ಮೂಲವು, ಪರಿಶುದ್ಧರ ತಿಳುವಳಿಕೆಯೇ ವಿವೇಕವು”

ಜ್ಞಾನ – ಜ್ಞಾನೋಕ್ತಿ 9:10

757. ಯೇಸುವು ತನ್ನನ್ನು ಹಿಂಬಾಲಿಸು ಎಂದು ಹೇಳಿದಾಗ ದು:ಖದಿಂದ ಹೊರಟುಹೋದ ಯೌವ್ವನಸ್ಥನಾರು?

ಅವನ ಹೆಸರು ಬರೆಯಲ್ಪಟ್ಟಿಲ್ಲ, ಆದರೆ ಅವನು ಐಶ್ವರ್ಯವಂತನು – ಮಾರ್ಕ10:17-22

758. ಮಹೋನ್ನತ ದೇವರ ಮೊದಲ ಯಾಜಕ ಯಾರು?

ಮೆಲ್ಕಿಜೆದೇಕ – ಆದಿ 14:18

759. ಭೂಮಿಯ ಸೃಷ್ಟಿಗಳ ವಿಷಯದಲ್ಲಿ ದೇವರು ಯಾರಿಗೆ ವೈಜ್ಞಾನಿಕ ಅಧ್ಯಾಯಗಳನ್ನು ನೀಡಿದನು?

ಯೋಬ - ಯೋಬ38:4-9

760.ಮಾಣಿಕ್ಯಗಳಿಗಿಂತ ಉತ್ತಮವಾದುದು ಯಾವುದು?

ಜ್ಞಾನ – ಜ್ಞಾನೋಕ್ತಿ 8:11