Level 77 ಬೈಬಲ್ ಕ್ವಿಜ್

761. ಕರ್ತನ ಮತ್ತೆ ಬರೋಣದ ದಿನಗಳು ಮತ್ತು ನೋಹನ ದಿನಗಳಲ್ಲಿ ಇರುವ ಸಾಮ್ಯವೇನು?

ಮೇಲಿನ ಎಲ್ಲವೂ – ಮತ್ತಾಯ 24:37-39

762. ಯೋಸೇಫನನ್ನು ಮಾರಬೇಕೆಂಬುದು ಯಾರ ಆಲೋಚನೆ?

ಯೂದ – ಆದಿ 37:26,27

763. ದೇವರು ಒಬ್ಬ ಪ್ರವಾದಿಗೆ ವ್ಯಭಿಚಾರಿಣಿಗಳಿಂದ ಒಬ್ಬ ಹೆಂಡತಿಯನ್ನು ಮಾಡಿಕೋ ಎಂದು ಅಪ್ಪಣೆ ಮಾಡುತ್ತಾರೆ. ಆ ಪ್ರವಾದಿ ಯಾರು?

ಹೊಶೇಯ - ಹೊಶೇಯ 1:2

764. ಯೆಹೋಶುವನ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ?

24

765. ಆತನು ಮರಣವನ್ನು ______ದಿಂದ ನುಂಗಿಬಿಡುವನು, ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ______ ಒರೆಸಿಬಿಡುವನು.

ಜಯ ಮತ್ತು ಕಣ್ಣೀರು 25:8

766. ದಾನಿಯೇಲನ ಕನಸಿನಲ್ಲಿ, ಟಗರು ಏನನ್ನು ಸೂಚಿಸುತ್ತದೆ?

ಮೇದ್ಯರು ಮತ್ತು ಪರ್ಷಿಯರ ರಾಜರು – ದಾನಿ 8:20

767. ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ______________ ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು.

ಗಂಡಸರ ಸಂಗಡ ಗಂಡಸರು – ರೋಮಾ 1:27

768. ಮೊದಲ ರಕ್ತಸಾಕ್ಷಿ ಯಾರು?

ಸ್ತೆಪನ– ಅಪೋ 7:54-60

769. ಯಾವುದು ದೇವರ ವಾಕ್ಯವನ್ನು ಅಡಗಿಸಿ ನಿಷ್ಫಲವಾಗುವಂತೆ ಮಾಡುವುದು?

ಲೋಕದ ಐಶ್ವರ್ಯಗಳು ಮತ್ತು ವಸ್ತುಗಳು – ಮಾರ್ಕ 4:19

770. ಅಬ್ರಹಾಮನು ಕಾಣಿಕೆಯನ್ನು ಯಾವ ಯಾಜಕನಿಗೆ ನೀಡಿದನು?

ಮೆಲ್ಕಿಜೇದೇಕ - ಆದಿ 14:18-20