Level 88 ಬೈಬಲ್ ಕ್ವಿಜ್

871. ಸ್ವಾಮಿ ನಿನಗೆ ;ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಎಂದು ಹೇಳಿದ ಕುಷ್ಠರೋಗಿಗೆ ಯೇಸು ಏನೆಂದು ಉತ್ತರಿಸಿದನು?

ನನಗೆ ಮನಸ್ಸುಂಟು, ಸುದ್ಧನಾಗು - ಮತ್ತಾಯ 8:3

872. ಶತಾಧಿಪತಿಯ ಆಳಿಗೆ ಏನು ಸಮಸ್ಯೆ ಇತ್ತು.

ಪಾಶ್ರ್ವವಾಯು - ಮತ್ತಾಯ 8:5,6

873. ಶತಾಧಿಪತಿ ಹೇಳಿದನು, ಯೇಸುವಿಗೆ ಅಧಿಕಾರವಿರುವುದರಿಂದ ಆತನು ಕೇವಲ ಇಷ್ಟು ಮಾಡಿದರರ ಸಾಕು, ಆತನ ಆಳು ಸೌಖ್ಯ ಹೊಂದುವನು.

ಒಂದು ಮಾತು ಹೇಳಿದರೆ ಸಾಕು - ಮತ್ತಾಯ 8:8

874. ಪೇತ್ರನ ಅತ್ತೆಯು ಯಾವುದರೀಮದ ಬಾಧಿಸಲ್ಪಡುತ್ತಿದ್ದಳು?

ಜ್ವರ - ಮತ್ತಾಯ 8:14

875. ಶಿಷ್ಯರು ದೋಣಿಯಲ್ಲಿರುವಾಗ, ಸಮುದ್ರದಲ್ಲಿ ಬಿರುಗಾಳಿ ಎದ್ದಿತು. ಆಗ ಯೇಸು ಏನು ಮಾಡುತ್ತಿದ್ದರು?

ನಿದ್ದಿ ಮಾಡುತ್ತಿದ್ದನು - ಮತ್ತಾಯ 8:24

876. ಶಿಷ್ಯರು ಭಯದಿಂದಿರುವಾಗ ಯೇಸು ಅವರನ್ನು ಏನೆಂದು ಕರೆದನು?

ಎಲೈ ಅಲ್ಪವಿಶ್ವಾಸಿಗಳೇ - ಮತ್ತಾಯ 8:26

877. ಜನರು ಬೆರಗಾದರು, ಏಕೆದರೆ,

ಸಮುದ್ರ ಮತ್ತು ಗಾಳಿ ಯೇಸು ಹೇಳಿದ ಹಾಗೆ ಕೇಳಿದವು - ಮತ್ತಾಯ 8:27

878. ಸಮುದ್ರ ಆಚೆದಡದಲ್ಲಿ ಇಬ್ಬರು ಬಂದು ಯೇಸುವನ್ನು ಸಂಧಿಸಿದರು, ಅವರು

ದೆವ್ವ ಹಿಡಿದವರು - ಮತ್ತಾಯ 8:28

879. ಯೇಸು ದೆವ್ವಗಳನ್ನು ಓಡಿಸಲು ಅವು ಇವುಗಳೊಳಗೆ ಹೊಕ್ಕಿತು

ಹಂದಿಗಳ ಗುಂಪು - ಮತ್ತಾಯ 8:32

880. ಹಂದಿಗಳೆಲ್ಲಾ ರಭಸವಾಗಿ ಇಲ್ಲಿಗೆ ಓಡಿದವು

ಸಮುದ್ರದೊಳಗೆ - ಮತ್ತಾಯ 8:32