Level 89 ಬೈಬಲ್ ಕ್ವಿಜ್

881. ಯೇಸು ಈ ರೋಗದಿಂದ ನರಳುತ್ತಿರುವ ಮನುಷ್ಯನನ್ನು ಗುಣಪಡಿಸಿದನು

ಪಾಶ್ರ್ವವಾಯು - ಮತ್ತಾಯ 9:2

882. ಸುಂಕಕ್ಕೆ ಕೂತಿದ್ದ ಯಾವ ಶಿಷ್ಯನನ್ನು ಯೇಸು ಕರೆದರು?

ಮತ್ತಾಯ - ಮತ್ತಾಯ 9:9

883. ಒಬ್ಬ ಅಧಿಕಾರಿಯು ಯೇಸುವಿನ ಬಳಿ ಬಂದು ಯಾರ ಮೇಲೆ ಕೈ ಇಡಬೇಕೆಂದು ಕೇಳಿದನು?

ತನ್ನ ಮಗಳು - ಮತ್ತಾಯ 9:18

884. ಎಷ್ಟು ವರ್ಷದಿಂದ ರೋಗದಲ್ಲಿದ್ದ ಸ್ತ್ರೀಯು ಯೇಸುವಿನ ಬಳಿಗೆ ಬಂದಳು?

12 ವರ್ಷ - ಮತ್ತಾಯ 9:20

885. ಯೇಸು ಆ ಸ್ತ್ರೀಗೆ ಏನು ಹೇಳಿದನು?

ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು - ಮತ್ತಾಯ 9:22

886. ಯೇಸು ಅಧಿಕಾರಿಯ ಮನೆಗೆ ಬಂದಾಗ, ಅಲ್ಲಿ ಗದ್ದಲ ಮಾಡುವವರಿಗೆ ಯೇಸು ಏನು ಹೇಳಿದನು?

ಹುಡುಗಿ ಸತ್ತಿಲ್ಲ, ನಿದ್ದೆ ಮಾಡುತ್ತಿದ್ದಾಳೆ - ಮತ್ತಾಯ 9:24

887. ಯೇಸು ಇದನ್ನು ಹೇಳಿದಾಗ, ಜನರು

ಆತನನ್ನು ಹಾಸ್ಯ ಮಾಡಿದರು - ಮತ್ತಾಯ 9:24

888. ಇಬ್ಬರು ಕುರುಡರು ಏನೆಂದು ಕೂಗುತ್ತಾ ಯೇಸುವನ್ನು ಹಿಂಬಾಲಿಸಿದರು?

ದಾವೀದನ ಕುಮಾರನೇ, ನಮ್ಮನ್ನು ಕರುಣಿಸು - ಮತ್ತಾಯ 9:27

889. ದೆವ್ವ ಹಿಡಿದ ಒಬ್ಬ ಮೂಕನನ್ನು ಯೇಸುವಿನ ಬಳಿಗೆ ತಂದಾಗ, ಯೇಸು ಏನು ಮಾಡಿದ?

ದೆವ್ವವನ್ನು ಓಡಿಸಿದನು - ಮತ್ತಾಯ 9:33

890. ಕೆಲಸಗಾರರಿಗಾಗಿ ಪ್ರಾರ್ಥಿಸಿರಿ, ಏಕೆಂದರೆ ಬೆಳೆಯು ಬಹಳ, ಕೆಲಸಗಾರರು .........

ಕಡಿಮೆ - ಮತ್ತಾಯ 9:37,38