Level 93 ಬೈಬಲ್ ಕ್ವಿಜ್

921. ದಾರಿಯ ಮಗ್ಗುಲಲ್ಲಿ ಬಿದ್ದ ಬೀಜಗಳು ಏನಾದವು?

ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು - ಮತ್ತಾಯ 13:4

922. ಬಂಡೆಯ ನೆಲದಲ್ಲಿ ಬಿದ್ದ ಬೀಜಗಳು ಏನಾದವು?

ಬೇರಿಲ್ಲದ ಕಾರಣ ಅವು ಒಣಗಿಹೋದವು - ಮತ್ತಾಯ 13:5,6

923. ಮುಳ್ಳುಗಿಡಗಳಲ್ಲಿ ಬಿದ್ದ ಬೀಜಗಳು ಏನಾದವು?

ಅವು ನಾಶವಾದವು - ಮತ್ತಾಯ 13:7

924. ಒಳ್ಳೆ ನೆಲದಲ್ಲಿ ಬಿದ್ದ ಬೀಜಗಳು ಏನಾದವು?

ಅವು ಫಲ ನೀಡಿದವು - ಮತ್ತಾಯ 13:8

925. ಯಾವ ಬೆಳೆಯ ನಡುವೆ ಹಣಜಿ ಬಿತ್ತಲ್ಪಟ್ಟಿತು?

ಗೋಧಿ - ಮತ್ತಾಯ 13:25

926. ಪರಲೋಕ ರಾಜ್ಯವನ್ನು ಯೇಸು ಯಾವ ಬೀಜಕ್ಕೆ ಹೋಲಿಸಿದ್ದಾರೆ?

ಸಾಸಿವೆ - ಮತ್ತಾಯ 13:31

927. ಒಬ್ಬ ಸ್ತ್ರೀಯು ತನ್ನ ಅಡುಗೆ ಹಿಟ್ಟಿನಲ್ಲಿ ಕಲಿಸುವ ಯಾವುದಕ್ಕೆ ಪರಲೋಕರಾಜ್ವವನ್ನು ಯೇಸು ಹೋಲಿಸಿದ್ದಾರೆ?

ಹುಳಿಹಿಟ್ಟು - ಮತ್ತಾಯ 13:33

928. ಯೇಸು ಹೇಳಿದ್ದು, ಒಬ್ಬ ವ್ಯಾಪಾರಿಯು ತನ್ನ ಬದುಕನ್ನೆಲ್ಲಾ ಮಾರಿ ________ ಕೊಂಡುಕೊಳ್ಳುವುದಕ್ಕೆ ಪರಲೋಕರಾಜ್ಯವು ಹೋಲಿಕೆಯಾಗಿದೆ.

ಮುತ್ತುಗಳನ್ನು - ಮತ್ತಾಯ 13:45,46

929. ಯೇಸು ಪರಲೋಕರಾಜ್ಯವನ್ನು ಮೀನಿನ ಬಲೆಗೆ ಹೋಲಿಸಿದಾಗ, ಕೆಟ್ಟಮೀನುಗಳನ್ನು ಏನು ಮಾಡುವರೆಂದು ಯೇಸು ಹೇಳಿದನು?

ಅವುಗಳನ್ನು ಹೊರಗೆ ಬಿಸಾಡುಬಿಡುವರು - ಮತ್ತಾಯ 13:47,48

930. ಯೇಸು ತನ್ನ ಸ್ವಂತ ಗ್ರಾಮದಲ್ಲಿ ಅನೇಕ ಅದ್ಭುತಗಳನ್ನು ಮಾಡಲಾಗಲಿಲ್ಲ. ಏಕೆ?

ಅವರ ಅಪನಂಬಿಕೆಯಿಂದ - ಮತ್ತಾಯ 13:57,58