Level 94 ಬೈಬಲ್ ಕ್ವಿಜ್

931. ಹೆರೋದನು ಈ ಮನುಷ್ಯನನ್ನು ಸೆರೆಗೆ ಹಾಕಿಸಿದನು.

ಸ್ನಾನಿಕನಾದ ಯೋಹಾನ - ಮತ್ತಯ 14:3

932. ಹೆರೋದನು ಸಂತೋಷಪಡುವಂತೆ ಹೆರೋದ್ಯಳ ಮಗಳು ಏನು ಮಾಡಿದಳು?

ನೃತ್ಯ - ಮತ್ತಯ 14:6

933. ಹೆರೋದ್ಯಳು ತನ್ನ ಮಗಳಿಗೆ ಏನನ್ನು ಕೇಳಿಕೊಳ್ಳಬೇಕೆಂದು ತಿಳಿಸಿದಳು?

ಸ್ನಾನಿಕನಾದ ಯೋಹಾನನ ತಲೆ - ಮತ್ತಯ 14:8

934. ಹೆರೋದನು ಯಾರ ವಿಷಯವಾಗಿ ಸ್ನಾನಿಕನಾದ ಯೋಹಾನನು ತಿರುಗಿ ಬದುಕಿ ಬಂದಿದ್ದಾನೆ ಎಂದು ಹೇಳಿದನು?

ಯೇಸು - ಮತ್ತಯ 14:1,2

935. ಜನರ ಗುಂಪಿಗೆ ಉಣಿಸಲು ಯೇಸು ಏನನ್ನು ಬಳಸಿದನು?

2 ಮೀನು 5 ರೊಟ್ಟಿ - ಮತ್ತಯ 14:17-20

936. ಅವರಿಗೆ ಎಷ್ಟು ಪುಟ್ಟಿ ಉಳಿಯಿತು?

12 ಪುಟ್ಟಿ - ಮತ್ತಯ 14:20

937. ಯೇಸುವು ಬಿರುಗಾಳಿಯಲ್ಲಿ ಸಮುದ್ರದಲ್ಲಿ ನಡೆದು ಬರುತ್ತಿರುವುದನ್ನು ನೋಡಿ, ಶಿಷ್ಯರು ಏನೆಂದು ಕೊಂಡರು?

ಆತನು ಭೂತ - ಮತ್ತಯ 14:26

938. ಪೇತ್ರನು ಮುಳುಗಲು ಪ್ರಾರಂಭಿಸಿದಾಗ ಅವನು ಏನೆಂದು ಕೂಗಿಕೊಂಡನು?

ಕರ್ತನೇ, ನನ್ನನ್ನು ರಕ್ಷಿಸು- ಮತ್ತಯ 14:30

939. ಯೇಸು ಮತ್ತು ಪೇತ್ರನು ದೋಣಿಯೊಳಕ್ಕೆ ಹೋದಾಗ ಏನಾಯಿತು?

ಗಾಳಿಯು ನಿಂತುಹೋಯಿತು - ಮತ್ತಯ 14:32

940. ಯೇಸು ಗೆನಜರೇತು ಪ್ರಾಂತ್ಯದಲ್ಲಿದ್ದಾಗ, ಅಲ್ಲಿದ್ದ ರೋಗಿಗಳು ತಾವು ಪರಿಪೂರ್ಣ ಸೌಖ್ಯರಾಗಲು ಏನು ಮಾಡಿದರು?

ಆತನ ವಸ್ತ್ರದ ಗೊಂಡೆಯನ್ನು ಮುಟ್ಟಿದರು - ಮತ್ತಯ 14:34-36